Home > Event > ವಿಶೇಷ ಮಕ್ಕಳ ಬದುಕು ಬದಲಾಯಿಸಿದ ಯಶೋಗಾಥೆ- ಲೇಖನ ಸ್ಪರ್ಧೆ
Loading Events

« All Events

  • This event has passed.

ವಿಶೇಷ ಮಕ್ಕಳ ಬದುಕು ಬದಲಾಯಿಸಿದ ಯಶೋಗಾಥೆ- ಲೇಖನ ಸ್ಪರ್ಧೆ

July 5, 2021 @ 10:00 am - 5:00 pm

ನಾರಾಯಣ ವಿಶೇಷ ಮಕ್ಕಳ ಶಾಲೆ,ತಲ್ಲೂರು. ಕುಂದಾಪುರ, ಉಡುಪಿ ಜಿಲ್ಲೆ,

 ಆಯೋಜಿಸುವ

ಯಶೋಗಾನ

ವಿಶೇಷ ಮಕ್ಕಳ ಬದುಕು ಬದಲಾಯಿಸಿದ ಯಶೋಗಾಥೆಲೇಖನ ಸ್ಪರ್ಧೆ

  ಕರ್ನಾಟಕದ ಯಾವುದೇ ಭಾಗದಲ್ಲಿ ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋಷಕರು, ಶಿಕ್ಷಕರು, ಥೆರಪಿಸ್ಟ್‌ಗಳು, ಆಪ್ತಸಮಾಲೋಚಕರು ಮತು ಆರೈಕೆದಾರರು, ತಾವು ತಮ್ಮ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ವಿಶೇಷ ಮಗುವಿನ ಸಮಸ್ಯಾತ್ಮಕ ವರ್ತನೆ/ ನಡವಳಿಕೆಗಳಲ್ಲಿ (BEHAVIOUR), ಕಲಿಕಾ ಚಟುವಟಿಕೆಗಳಲ್ಲಿ ತಂದಂತಹ ಬದಲಾವಣೆಗಳು ಅಥವಾ ಹೊಸ ಉತ್ತಮ ನಡವಳಿಕೆಯನ್ನು ರೂಪಿಸಲು/ ಹೊಸ ಕೌಶಲ್ಯಗಳನ್ನು ಅಳವಡಿಸಲು ತಾವು ಅನುಸರಿಸಿದ ತರಬೇತಿ ವಿಧಾನಗಳು, ಯೋಜನೆಗಳು ಮತ್ತು ಉಪಯೋಗಿಸಿದ ಜಾಣ್ಮೆ  ಮತ್ತು ಕಂಡುಕೊಂಡ ಫಲಿತಾಂಶದ ಕುರಿತು 1500 ಪದಗಳನ್ನು ಮೀರದಂತೆ ಕನ್ನಡದಲ್ಲಿ ಲೇಖನವನ್ನು ಬರೆದು ಕಳುಹಿಸಿಕೊಡಬಹುದು.

ಆಯ್ಕೆಯಾದ ಮೂರು ಉತ್ತಮ ಲೇಖನಗಳಿಗೆ ತಲಾ ಎರಡು ಸಾವಿರ (2000/-)ರೂಗಳ ನಗದು ಪುರಸ್ಕಾರವನ್ನು ನೀಡಲಾಗುವುದು, ಸ್ವೀಕರಿಸಿದ ಲೇಖಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ, ಆಯ್ಕೆ ನಡೆಸುತ್ತದೆ. ಭಾಗವಹಿಸಿದ ಎಲ್ಲರಿಗೂ ಇ- ಪ್ರಮಾಣ ಪತ್ರವನ್ನು ನೀಡಲಾಗುವುದು.

ನಿಬಂಧನೆಗಳು:

  1. ಲೇಖನವು ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು.
  • ಮಗುವಿನ ಸಮಸ್ಯೆ,
  • ಸಮಸ್ಯೆಯನ್ನು ಗುರುತಿಸಿದ ವಿಧಾನ,
  • ಬದಲಾವಣೆ ತರಲು ರೂಪಿಸಿದ ಯೋಜನೆ,
  • ಅದನ್ನು ಕಾರ್ಯಗತಗೊಳಿಸಿದ ವಿಧಾನ,
  • ತಂತ್ರಗಳು, ಬಳಸಿದ ಪರಿಕರಗಳು,
  • ತರಬೇತಿ ಅನುಷ್ಠಾನಗೊಳಿಸುವಲ್ಲಿ ಎದುರಿಸಿದ ಸವಾಲುಗಳು,
  • ಹಂತಗಳು ಮತ್ತು ತೆಗೆದುಕೊಂಡ ಕಾಲಾವಧಿ,
  • ಕಂಡುಕೊಂಡ ಫಲಿತಾಂಶ ಅಥವಾ ಮಗುವಿನ ನಡವಳಿಕೆಯಲ್ಲಿ ಆದಂತಹ ಬದಲಾವಣೆ.
  1. ಲೇಖನವು ಕಂಪ್ಯೂಟರ್ ಮೂಲಕ ಮುದ್ರಿಸಿದ ಪ್ರತಿಯಾಗಿದ್ದರೆ ಉತ್ತಮ. ಅದನ್ನು ಪಿಡಿಎಪ್(PDF)ರೂಪದಲ್ಲಿ ಮೇಲ್ ಮೂಲಕ ಕಳುಹಿಸಿಕೊಡಬಹುದು, ಬರಹ/ಹಸ್ತಪ್ರತಿಯಾಗಿದ್ದರೆ ಕೆಳಗೆ ನಮೂದಿಸಿದ ವಿಳಾಸಕ್ಕೆ ಕಳುಹಿಸಿಕೊಡಬಹುದು.
  2. ಒಂದು ಲೇಖನವು ಒಂದು ಮಗುವಿನ ಯಾವುದಾದರೂ ಒಂದು ಕೌಶಲ್ಯದ ಬಗ್ಗೆ ವಿಸ್ತೃತವಾಗಿದ್ದರೆ ಉತ್ತಮ.
  3. ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನವನ್ನು ಕಳುಹಿಸಿಕೊಡಬಹುದು. ಆದರೆ, ಒಂದೆ ವಿಕಲತೆಯ ಬಗ್ಗೆ ಲೇಖನವು ಇರಬಾರದು. (ಉದಾ:ಒಬ್ಬ ಲೇಖಕರ ಒಂದು ಲೇಖನವು ಆಟಿಸಂನ ಬಗ್ಗೆ ಇದ್ದು, ಮತ್ತೊಂದು ಲೇಖನವು ಕೂಡಾ ಆಟಿಸಂನ ಬಗ್ಗೆ ಇದ್ದರೆ, ಒಂದನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.)
  4. ಲೇಖನವು ಸ್ವಅನುಭವದಿಂದ ಕೂಡಿರಬೇಕು. ನಕಲು ಪ್ರತಿಗಳಿಗೆ ಅವಕಾಶವಿರುವುದಿಲ್ಲ.
  5. ಹಸ್ತಪ್ರತಿಗಳು ಸ್ಪುಟವಾಗಿ, ಸ್ಪಷ್ಟವಾದ ಬರಹದಿಂದ ಕೂಡಿರಬೇಕು.
  6. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ನಿಟ್ಟಿನಲ್ಲಿ ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ
  7. ದಿನಾಂಕ 07.2021 ಸಂಜೆ 5.00ರ ಒಳಗೆ ತಮ್ಮ ಲೇಖನವನ್ನು ನಮಗೆ ತಲುಪಿಸಬೇಕು.
  8. ನಿಮ್ಮ ಲೇಖನವು ಕಂಪ್ಯೂಟರ್ ಮುದ್ರಿಸಿದ ಪ್ರತಿಯಾಗಿದ್ದರೆ tallurspecialschool@gmail.com. ಮಿಂಚಂಚೆಗೆ ಕಳುಹಿಸಿಕೊಡಿ. ಹಸ್ತಪ್ರತಿಯಾಗಿದ್ದರೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ.

ನಾರಾಯಣ ವಿಶೇಷ ಮಕ್ಕಳ ಶಾಲೆ,

ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಂಗ ಸಂಸ್ಥೆ,

ಎನ್.ಎಚ್66, ತಲ್ಲೂರು,

ಕುಂದಾಪುರ, ಉಡುಪಿ ಜಿಲ್ಲೆ-576230

ಮೊಬೈಲ್:8147670262,

 

  1. ಲೇಖನದೊಂದಿಗೆ ತಮ್ಮ ಸ್ವ ವಿವರಗಳನ್ನು ಕಳುಹಿಸಿಕೊಡಬೇಕು. (ಹೆಸರು, ವಿಶೇಷ ಮಕ್ಕಳ ಕ್ಷೇತ್ರದಲ್ಲಿನ ಅನುಭವದ ವಿವರ, ವಿದ್ಯಾರ್ಹತೆ, ವಿಳಾಸ, ದೂರವಾಣಿ, ಮಿಂಚಂಚೆ(E-MAIL))

ಸ್ವೀಕರಿಸಿದ ಲೇಖನವನ್ನು ಸಂಸ್ಥೆಯು ಅಧ್ಯಯನ/ಜ್ಞಾನದ ವಿಸ್ತರಣೆಯ ಉದ್ದೇಶಕ್ಕಾಗಿ ಬಳಸುವ ಹಕ್ಕನ್ನು ಕಾಯ್ದಿರಿಸಲಾಗಿದೆ. ಕನಿಷ್ಠ 6 ಎಂಟ್ರಿಗಳು ಬರದಿದ್ದಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದಿಲ್ಲ ಮತ್ತು ಬಂದ ಎಂಟ್ರಿಗಳು ಉದ್ದೇಶಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಆಯ್ಕೆ ಸಮಿತಿ ತೀರ್ಮಾನಿಸಿದರೆ, ಬಹುಮಾನಗಳನ್ನು ನಿರಾಕರಿಸುವ ಅಥವಾ ಬಹುಮಾನಗಳ ಸಂಖ್ಯೆಯನ್ನು ಮಿತಗೊಳಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ.

 

Details

Date:
July 5, 2021
Time:
10:00 am - 5:00 pm