Join us for Noble Cause







Join us for Noble Cause







Join us for Noble Cause







Join us for Noble Cause
previous arrow
next arrow
Slider

Introducing ourselves…

Tallur Family Trust is committed to working in the field of disability, concentrating its efforts on the local community. The vision has been to promote a safe and dignified environment for the disabled groups, especially those from the poor and marginalized, wherein each individual lives of the disabled can be strengthened through a holistic approach. “Tallur Family Trust ®, a public charitable trust is a Registered Public Trust under Indian Trust Act and Income Tax Act of 1961 having 12 AA and 80 G certificates and FCRA certificate from the Union Government.  We are registered under National Trust Act 1991 under section 12(4) and registered under Section 51, 52 of Rights of Persons with Disabilities Act, 2016 / Persons with Disabilities Act, 1995”

Our Vision

Tallur Family Trust believes in the overall development of the disabled and considers them inseparable from the overall development of the community as a whole. Anchored in this belief, the Trust invests itself in building solidarity and fraternity through which the rights of the disabled are upheld. The works of the Trust are geared towards creating inclusive and equitable platforms, based on humanitarian values and also towards enriching the social, cultural, education and health sectors in the community. It is a firm belief of the Trust that healthy lives of individual, especially those who are marginalized and disabled, cannot be ensured without a healthy society being created at large.

Social Responsibility Can Not Remain Just A Lip Service

Disabled people also have the right to an equal and qualitative life. This can be achieved with technological interventions, creation of equal opportunities and barrier free environment, along with constructive attitudes and committed professionalism. To orchestrate this, the Tallur Family Trust with its effective team works relentlessly, longing to achieve comprehensive rehabilitation leading to mainstreaming of the disabled persons. These works aimed to empower the disabled is made more effective with research and educating the community regarding the rights of the disabled and also their families. The Trust also desires to become a social service center to train the illiterate people in the community in not just education but also arts and health, through which a wealth of human resources can be generated in and for the community.

Events

Testimonials

‘The School is doing an amazing job in this rural area. Let there be research done to make learning effective and child-centred.’

Prf. Robert Jose

Sri Krishnadevaraya University, Bellary | 03 Feb 2019

‘It’s a mirror to my self-actualization. Narayana Special School is working for the process of self-actualization of the society around. Let this go ahead with the newer technologies of ‘self’ and rootedness in our traditions.’

Dr. Dominic

Bangalore University | 03 Feb 2019

‘ನಾರಾಯಣ ವಿಶೇಷ ಶಾಲೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕರ ನಿಷ್ಕಲ್ಮಶ ಕಾಳಜಿ, ಟ್ರಸ್ಟಿಗಳ ಕಾರ್ಯವು ಶ್ಲಾಘನೀಯವಾಗಿದೆ. ಈ ಸಂಸ್ಥೆಯು ಇನ್ನೂ ಮುಂದೆಯೂ ಚೆನ್ನಾಗಿ ಬೆಳೆಯಲಿ. ಇದೇ ರೀತಿ ಅನೇಕ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಲಿ ಎಂದು ಬಯಸುತ್ತಾ,

ಕೆ ವಿದ್ಯಾಕುಮಾರಿ

ಅಪರ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ. | 03 Feb 2019

‘ಈ ಸಂಸ್ಥೆಯನ್ನು LIC ಅಧಿಕಾರಿಗಳ ಸಂಘ ಉಡುಪಿ ಇದರ ವತಿಯಿಂದ ದಿನಾಂಕ 26.01.2019 ರಂದು ಭೇಟಿಯಾಗಿದ್ದೇವೆ. ಸಂಸ್ಥೆಯ ಸಾಮಾಜಿಕ ಸೇವೆಯು ಶ್ಲಾಘನೀಯ. ಇವರಿಗೆ ಸರಕಾರದಿಂದಲೂ ಸಹಾಯ ಸಿಗುವಂತಾಗಬೇಕು. ಇದು ಫ್ಯಾಮಿಲಿ ಟ್ರಸ್ಟ್ ಅಲ್ಲ. ಸಮಾಜ ಸೇವೆ .ವಿಕಲ ಚೇತನರ ಈ ಸೇವೆ ಸಾಮಾಜಿಕ ಬದುಕಿನಲ್ಲಿ ಬದುಕಿನ ನೆಲೆಯಾಗಿ ನಿಂತ ಇತರಿಗೆ ಒಳಿತಾಗಲಿ.’

ಅಯ್ಯ ನೀಲಾವರ್

ಅಧ್ಯಕ್ಷರು, LIC Officers Association, Udupi. | 26 Jan 2019

‘ತಲ್ಲೂರು ಫ್ಯಾಮಿಲಿ ಟ್ರಸ್ಟ ವತಿಯಿಂದ ನಡೆಸುತ್ತಿರುವ ಈ ಸಂಸ್ಥೆಯ ಕಾರ್ಯ ಬಹಳ ಶ್ಲಾಘನೀಯ. ಸಮಾಜದಲ್ಲಿ ವಿಕಲಚೇತನರಾಗಿ ಹುಟ್ಟಿದ ಮಕ್ಕಳಿಗೆ ಮುಂದಿನ ಭವಿಷ್ಯವನ್ನು ರೂಪಿಸುವ ಕಾರ್ಯವನ್ನು ಮಾಡುತ್ತಿರುವುದು ಮನುಕುಲದ ಸೇವೆ. ಈ ಸೇವಾ ಕಾರ್ಯಕ್ಕೆ ನಮ್ಮ ಸಂಘಟನೆಯಾದ ಎಲ್.ಐ.ಸಿ. ಆಫ್ ಇಂಡಿಯಾ ಕ್ಲಾಸ್-I ಆಫೀಸರ್ಸ್ ಎಸೋಶಿಯೇಶನ್ ವತಿಯಿಂದ ನಮ್ಮ ಯಥಾನುಶಕ್ತಿ ದೇಣಿಗೆಯನ್ನು ನೀಡುತ್ತಿರುವುದು ನಮಗೆಲ್ಲಾ ಧನ್ಯತಾಭಾವವನ್ನು ಉಂಟು ಮಾಡಿದೆ. ಇವರ ಈ ಕಾರ್ಯಕ್ಕೆ ಸಮಾಜದ ಎಲ್ಲರ ಸಹಕಾರವಿರಲಿ ಹಾಗೂ ಭಗವಂತನು ಇವರಿಗೆ ಇನ್ನೂ ಸೇವೆಯನ್ನು ಮಾಡುವ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇವೆ.’

ರಾಘವೇಂದ್ರ ಎಮ್. ಸಾಮಗ | 26 Jan 2019

‘I wish all the best & success of the team of Narayana Special School Tallur.’

Secretary

LIC Class –I Officers Association, Udupi Division | 26 Jan 2019

‘It was great pleasure and a very good experience visiting “Narayana School for special children”. We greatly applaud the selfless service being done by Mr. Suresh & Mrs. Manoroma. I have absolutely no words for the work they have been doing. Wishing them all the best good health & all good things to happen in future.’ 

Latha Bhat

Brahmagiri, Udupi – 576101 | 07 Jan 2019

‘ಮುಕ್ತ ವಾತಾವರಣದಲ್ಲಿ ಮುಕ್ತ ಶಿಕ್ಷಣ ವ್ಯವಸ್ಥೆ ಇದೆ. ಸಮಾಜ ಜಾಗರಣ ಕಾರ್ಯ ಬೇಕಿದೆ. ಸಮಾಜದ ಸ್ಪಂದನ ಬೇಕಿದೆ. ’

“ಸಕ್ಷಮ” ಜಿಲ್ಲಾ ಅಧ್ಯಕ್ಷರು ಉಡುಪಿ ಜಿಲ್ಲೆ, “ಪಾಂಡುರಂಗ ಶ್ಯಾನುಭೋಗ” ಪಾಂಗಾಳ. | 07 Jan 2019

‘ನಾರಾಯಣ ವಿಶೇಷ ಶಾಲೆಯೆಂಬುದು ಒಂದು ಮನುಷ್ಯತ್ವದ ಪ್ರಯೋಗ ಶಾಲೆ. ಎಲ್ಲ ಮಕ್ಕಳಿಗೂ ಬದುಕುವ ಅವಕಾಶವನ್ನು ಹಾಗೂ ಹಕ್ಕನ್ನು ಕಾಪಾಡುವ ಹಾಗೂ ಸಾರ್ವಜನಿಕರೊಂದಿಗೆ ಸಹಯೋಗದಲ್ಲಿ ನಡೆಯುವ ಕಲಿಕೆಯನ್ನು ಇಲ್ಲಿ ಕಲ್ಪಿಸಿ ತರಬೇತಿಗೊಳಿಸಲಾಗಿದೆ. ಇದನ್ನು ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆಯೆಂದೇ ಭಾವಿಸುತ್ತೇನೆ. ತಲ್ಲೂರು ಕುಟುಂಬದ ಯಶಸ್ವಿ ನಡೆಯೆಂದೇ ನಾನು ಅವರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ. 

ಹೆಚ್ ಆರ್ ಸುಜಾತ

ಬರಹಗಾರ್ತಿ, Bangalore -94. | 01 Jan 2019

‘ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ಇಲ್ಲಿಗೆ ಇಂದು ಭೇಟಿ ನೀಡಿದಾಗ ಇಲ್ಲಿನ ಆಡಳಿತ ಮಂಡಳಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಪ್ರತಿಯೊಂದು ಮಗುವನ್ನು ತಿದ್ದಿ ತೀಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ಬಗ್ಗೆ ಸದಾ ಚಿಂತನೆ ಕಂಡು ಬಹಳ ಸಂತೋಷವಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೊಂದಾಣಿಕೆ ತುಂಬಾ ವಿಶೇಷವಾಗಿದೆ.’

Sri Ganesh Prasad

Sulse, Kattabeltur | 20 Dec 2018

‘We had great time in this special school. The staffs are very good and kids here are very pleasant. We spent very special moments with the special kids. Thanks all the staff for their warm welcome and hospitality. Will visit again soon.’

Amita Pradeep Devadiga Sulse, Katta beltur. | 20 Dec 2018

‘Staff & Children are very good. Staff management is good and they take care of every child. Management is like family & they are responsible and take good care about students. Thank you for giving permission to visit here & yours information.’

Ameena | 10 Dec 2018

‘Staff and students are very good and kind. I love the students, very kind, the management is very good and they are responsible. I and my family pray to god golden future to them.’

B. SARAN KUMAR | 04 Dec 2018

‘This is an excellent social venture not only serving the community but also including and using renewable energy to its fullest potential. Not only the students are taught skill development from a tender age but also a way to introduce them to the ways and means to keep the environment safe from pollutants must be one of the best way for all round development of the young hopefuls of the country. Would like to wish the entire staff all the best and success in the future.’

Behalf of the entire Incubators. Bangalore | 27 Nov 2018

‘This is really a fantastic work going on for this community. This is not just upliftment of the community it’s a complete reformation and giving an opportunity to live a life pleasantly and confidently whenever these students will be out of this building in an actual world.
I am coming from selco organization. I hope our small contribution is making some benefit to the student and organization.’

(Mayur Sande), Selco| 29 Aug 2018

‘ಮಾನ್ಯರೆ, ನಾನು ಇಲ್ಲಿಗೆ ಸತತ 4 ವರ್ಷದಿಂದ ಬರುತ್ತಿದ್ದೇನೆ. ಇಲ್ಲಿಯ ವಾತಾವರಣ ನೋಡುವಾಗ ತುಂಬಾ ಖುಶಿಯಾಗುತ್ತದೆ ಯಾಕೆಂದರೆ ಇಲ್ಲಿಯ trust ರವರ ಶ್ರಮ ನೋಡಿದರೆ ತುಂಬಾ ಕಷ್ಟದ ಕೆಲಸ ಆದರೂ ಇಷ್ಟು ಮಾಡುವುದು ಒಳ್ಳೆಯ ಕೆಲಸ. ಹಾಗೆ ಇಲ್ಲಿಯ ವಾತಾವರಣ ಮತ್ತು ಶುಚಿತ್ವ ನೋಡಿದರೆ ತುಂಬಾ ಖುಷಿಯಾಗುತ್ತದೆ.’

Abdul Bashir, Mid Town Rotary, Pleasant

‘ನಾಡೋಜ ಡಾ| ಜಿ..ಶಂಕರ್ ರವರ 64ನೇ ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಹಾಗೂ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇದರಿಂದ ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಇಂದು ಆಚರಿಸಿದ್ದೇವೆ. ನಿಜಕ್ಕೂ ಪ್ರಥಮವಾಗಿ ಇಲ್ಲಿಯ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಹೇಳಲೇಬೇಕು. ಸ್ತ್ರೀ ಸಹನಾ ಮೂರ್ತಿ ಅನ್ನುತ್ತಾರೆ ಅದು ಇಲ್ಲಿ ಸಾಕಾರಗೊಂಡಿದೆ. ಮುಂದಿನ ದಿನದಲ್ಲಿ ನಿಮ್ಮ ಸಹನಾಶೀಲತೆಯ ಸೇವೆ ಈ ಸಂಸ್ಥೆಗೆ ಸಿಗಲಿ ಅಂತೆಯೆ ಅದೆಷ್ಟೋ ಬಾಳಿನ ಬೆಳಕು ಕಾಣದ ಮಕ್ಕಳ ಬದುಕಿಗೆ ಆಸರೆಯಾಗಿರಲಿ ಎಂದು ಆಶಿಸುತ್ತೇವೆ.’

ಮಂಜುನಾಥ ನೆಂಪು, ಅಧ್ಯಕ್ಷರು, ಹೆಮ್ಮಾಡಿ ಘಟಕ

‘Dear Sir/Madam, I am overwhelmed by a scenario which I was exposed to true today, I really appreciate and thank you all for being a part of mankind service. Hope in future I would like explore more opportunities in this regard, let us serve the mankind together & work for holistic ecosystem.’

Shiva Prasad B, SELCO Foundation, Bangalore.

‘ಹಿಲ್ಕೋಡ ಉಮೇಶ ಗಾಣಿಗ ಇವರ ಪುತ್ರಿ ತನಿಷ್ಕಾ ಇವಳ ಮೂರನೇ ವರ್ಷದ ಜನ್ಮ ದಿನಾಚರಣೆಯನ್ನು ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು. ನಮಗೆ ಮನೆಯಲ್ಲಿ ಸರಿಯಾಗಿ ಇರುವ ಎರಡು ಮಕ್ಕಳನ್ನು ಸಾಕುವುದು ಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಶಿಕ್ಷಕಿಯರು ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುವ ರೀತಿ ತುಂಬಾ ಖುಷಿ ಆಯಿತು. ಇಲ್ಲಿ ಈ ಕಾರ್ಯಕ್ರಮ ಮಾಡಿರುವುದು ತುಂಬಾ ಸಂತೋಷ ಆಯಿತು ಹಾಗೂ ನಮಗೆ ಸಹಕಾರವನ್ನು ಕೊಟ್ಟ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಗೆ ತುಂಬಾ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.’

D.A Shekar Ganiga Movadi , Trasi .

‘ವಿಶೇಷ ಚೇತನರ ಸಬಲೀಕರಣ ಅದರಲ್ಲಿ ಬುದ್ಧಿ ಸವಾಲಿನವರ ಜತೆಗೆ ಕಷ್ಟಸಾಧ್ಯವಾದ ಕಾರ್ಯ ಇದು. ಮನಸ್ವೀ ಸ್ವೀಕಾರ ಮಾಡಿದ್ದೀರಿ ಅಭಿನಂದನೆಗಳು.
ಸಲಹೆ:- ಅಗ್ನಿ ಹೋತ್ರ ಕ್ರಿಯೆಯನ್ನು ಅಳವಡಿಸಿಕೊಂಡರೆ ಧನಾತ್ಮಕ ಶಕ್ತಿ ಸಂಚಯಕ್ಕೆ ಸಹಕಾರಿಯಾದೀತು. ವಂದನೆಗಳು.’

ಜಯರಾಮ ಬೊಳ್ಳಾಜೆ “ಸಕ್ಷಮ” ಕರ್ನಾಟಕ ಸಂಘಟನಾ ಕಾರ್ಯದರ್ಶಿ.

‘ಈ ಸಂಸ್ಥೆಯು ಸರಕಾರದ ಯಾವುದೇ ಅನುದಾನವಿಲ್ಲದಿದ್ದರೂ ಸಂಸ್ಥೆಯವರೇ ಸ್ವತಃ ಖರ್ಚು ಮಾಡಿಕೊಂಡು ಕಷ್ಟದಿಂದ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ. ಇವರಿಗೆ ಭಗವಂತ ಆಯುರಾರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿ ನೀಡಿ ಕರುಣಿಸಲಿ. ಸಮಾಜದ, ಸರಕಾರದ ಸಹಾಯ ಹರಿದು ಬರಲಿ. ದಿವ್ಯಾಂಗ ಮಕ್ಕಳ ಶ್ರೇಯೋಭಿವೃದ್ಧಿಯಾಗಿಲಿ.

Janardhan, Principal, Spandana Spl School, Udupi

‘Although I came for my own orientation visit, I am so grateful that I did this after knowing this wonderful work done by Tallur family trust. Educating children is such a difficult & thankless job but on top of that working with special need kids makes the job even more challenging. Hence, I am happy with the trust’s work. I hope government, non-government or any for that matter should support the trust with full heart. My good wishes to the best for this necessary endeavor.’

Mohsin, Selco foundation, Bangalore.

‘I am from Selco foundation, although our team is working with tallur trust since last one year, this my first visit to this Organization. After meeting with trustees respect will come without my knowledge because there is no words to explain about their efforts and work with Special Children’s. It’s my pleasure to be with the teachers & special children’s. I wish all the best for the team & family.’

Kishor Kumar, Selco foundation, Manipal.

‘ಕರಾವಳಿಯಲ್ಲಿ ‘ಕಟ್ಟುವ’ ಮಾದರಿಗೊಂದು ಒಳ್ಳೆಯ ಉದಾಹರಣೆ ಈ ನಾರಾಯಣ ವಿಶೇಷ ಶಾಲೆ – ಸಮರ್ಪಣಾ ಮನೋಭಾವದ ಶಿಕ್ಷಕ ವೃಂದ, ವಿಶೇಷ ಮಕ್ಕಳ ಸಾಧನಾಶೀಲತೆ, ಊರವರ ಬೆಂಬಲಗಳೆಲ್ಲ ಮುಪ್ಪುರಿಗೊಂಡ ಈ ಶಾಲೆಯನ್ನು ಅಸದೃಶ ತಾಯ್ತನದಿಂದ ಪೊರೆಯುತ್ತಿರುವ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ) ನಿಜಕ್ಕೂ ಅಭಿನಂದನೀಯ, ಅಭಿನಂದನೀಯ. ಶಾಲೆ, ಊರು, ಮಕ್ಕಳು ಬೆಳೆಯಲಿ ಬೆಳಗಲಿ.

ಸುಮಾ ಎಸ್, ಸಪಪೂ ಕಾಲೇಜು, ಹೆಬ್ರಿ.

‘We, the Chartered Accountant from Udupi Branch of SIRC OF ICAI really appreciate your efforts for bringing the disabled children to the main stream of life and we all wish you best in your efforts. We really see ‘God’ in your Temple like premises. God bless you all who are actively involved in this novel cause.’

CA P.P. Maejes, N. Shantharam Nayak, A SUDARSHAN PAI | 20 Aug 2018

‘ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರು, ರೋಟರಿ ಕ್ಲಬ್ ಕುಂದಾಪುರ ಮಿಡ್ಟೌನ್ ಸಂಸ್ಥೆಯಿಂದ ತಿಳಿಸಲು ಇಚ್ಛಿಸುವುದೇನೆಂದರೆ ಈ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಂತ ವಿಶೇಷ. ಇಂತಹ ಈ ಸಂಸ್ಥೆಯ ನಿರ್ದೇಶಕರಿಗೆ ಹಾಗೂ ಆಡಳಿತ ಮಂಡಳಿಯವರಿಗೆ ಹಾಗೂ ವಿಶೇಷವಾಗಿ ಇಲ್ಲಿ ಈ ಮಕ್ಕಳಿಗೆ ತರಬೇತಿ ಹಾಗೂ ಅವರ ಜ್ಞಾನ ಶಕ್ತಿಯನ್ನು ಹೆಚ್ಚಿಸಿ ಅಭಿವೃದ್ಧಿಗೊಳಿಸಿದ ಶಿಕ್ಷಕರಿಗೆ ಹಾಗೂ ಆಯರಿಗೆ ನಾವು ಅಭಿವಂದನೆ ಸಲ್ಲಿಸುತ್ತೇವೆ. ಈ ಮಕ್ಕಳು ಇನ್ನೂ ಅಭಿವೃದ್ಧಿ ಹೊಂದಲಿ ಎಂದು ನಾವು ಶುಭ ಹಾರೈಸುತ್ತೇವೆ.’

Prabhakar, Mid Town Rotary kundapur | 20 Aug 2018

‘ಈ ದಿವಸ ತಾ. 2/7/18 ರಂದು ನಮ್ಮ ಮಿಡ್ ಟೌನ್ ರೋಟರಿಯಿಂದ ಶ್ರೀಯುತ ಅಬ್ದುಲ್ ಬಶೀರ್, ಅಧ್ಯಕ್ಷರಾದ, ಪ್ರಭಾಕರ ರಾವ್ ಅವರು ಅನ್ನ ದಾಸೋಹದ ಪ್ರಯುಕ್ತ ಬಸೀರ್ ಅವರು ಕೊಡ ಮಾಡಿದ ಹಣವನ್ನು ಕೊಡಲು ಬಂದಿರುತ್ತೇವೆ. ಇಲ್ಲಿ ವ್ಯವಸ್ಥೆಯನ್ನು ನೋಡಿ ಇವರು ವಹಿಸುತ್ತಿರುವ ಕಾಳಜಿಯಿಂದ ಬುದ್ಧಿ ಮಾಂದ್ಯ ಮಕ್ಕಳು ಮಾಡುವ ಕೆಲಸವು ತುಂಬಾ ಒಳ್ಳೆಯದಾಗಿತ್ತು. ಇಲ್ಲಿಯ ಟ್ರಸ್ಟಿಯವರು ಹಾಗೂ ಅಧ್ಯಾಪಕರ ಕಾಳಜಿ ತುಂಬಾ ಇರುವುದರಿಂದ ನಮಗೆ ತುಂಬಾ ಖುಷಿ ಆಗಿದೆ ಅಂತ ಹೇಳಲು ಇಷ್ಟ ಪಡುತ್ತೇನೆ.’

ಸದಾನಂದ ಶೆಟ್ಟಿ, ಮಿಡ್ಟೌನ್ ರೋಟರಿ ಕುಂದಾಪುರ | 20 Aug 2018

‘ಈ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣವಿದೆ. ಮಕ್ಕಳ ಬಗ್ಗೆ ಶಿಕ್ಷಕಿಯರು ಉತ್ತಮ ಕಾಳಜಿ ವಹಿಸುತ್ತಿದ್ದಾರೆ. ಶಾಲೆಯ ಆವರಣ, ಕೊಠಡಿಗಳು ಎಲ್ಲವೂ ಅತ್ಯುತ್ತಮವಾಗಿದೆ.’

ಸರ್ವೋತ್ತಮ ಭಟ್

G.H.S. ಮರವಂತೆ | 20 Aug 2018

‘ಇಂದು ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ/ಶಿಕ್ಷಕೇತರರ ಸಂಘದ ಸಭೆಯನ್ನು ತಲ್ಲೂರು ವಿಶೇಷ ಶಾಲೆಯಲ್ಲಿ ನಡೆಸಲಾಯಿತು. ಬಹಳ ಉತ್ತಮ ರೀತಿಯ ವ್ಯವಸ್ಥೆ, ಊಟೋಪಾಚಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಶಾಲೆಯನ್ನು ಕೂಡ ಬಹಳ ಸ್ವಚ್ಫವಾಗಿಟ್ಟುಕೊಂಡಿದ್ದು, ವ್ಯವಸ್ಥಿತ ರೀತಿಯಲ್ಲಿ ಶಾಲೆಯನ್ನು ಮುನ್ನಡೆಸುತ್ತಾ ಇದ್ದಾರೆ ಮನೋರಮಾ teacher ಹಾಗೂ ತಂಡದವರು. ಎಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುತ್ತೇವೆ.’

ಅಧ್ಯಕ್ಷೆ ಆಗ್ನೇಸ್ ಕುಂದರ್, ಡಾ| ಕಾಂತಿ ಹರೀಶ್, ಜಿಲ್ಲಾಧ್ಯಕ್ಷೆ, ಉ.ಜಿ. ವಿ.ಶಿ. ಸಂಘ | 20 Aug 2018

‘We from St. Milagres Co-operative visited your special school, we had good experience over here, the way you all are handling the special children is very good, you all are looking them as your children, may god bless you with lot of happiness & joy. Best of luck for your future service. Thanking you,’

Ambrose, B.M. Byndoor | 20 Aug 2018

‘I will always remember this school and the beautiful time I spent here. Thank you so much for letting me be a part of this. I am wishing you all the best!’

Lisa Wiegand, Bonn, Germany. | 20 Jun 2018

‘Visited Narayana School for Disabled Run by Narayana Special School. This school need help from the donors to assist the children. Other organizations like Rotary Club and Lions Club may help this institution.’

Past-President

Rotary Club Kundapura. | 14 Jun 2018

‘ನಾರಾಯಣ ವಿಶೇಷ ಮಕ್ಕಳ ಶಾಲೆಗೆ ನೆರಳು ಸೇವಾ ಟ್ರಸ್ಟಿನ ವತಿಯಿಂದ ಭೇಟಿಯಾದ ಕ್ಷಣ. ಅದ್ಭುತವಾದ ಗುಣವುಳ್ಳ ಮಕ್ಕಳೊಂದಿಗೆ ಕಾಲ ಕಳೆದದ್ದು ತುಂಬಾ ಸಂತೋಷವಾಯಿತು. ಶಿಕ್ಷಕ ವೃಂದವರ ಸೇವೆ ಅಭೂತಪೂರ್ವವಾಗಿತ್ತು. ಇವರಿಗೆ ನೆರಳು ಸೇವಾಟ್ರಸ್ಟ್ನ ಪರವಾಗಿ ಹೃತ್ಫೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.’

Veerendra S Poojary, ಲೋಕೇಶ್ ಪೂಜಾರಿ, Gopal M. Chandan, Lokesh Poojary, Sudhakar N.P., Purushotham Surya, Rakshath Poojary, Shrikanth Poojary, Neetha Mogaveer, Supritha Gowada. | 04 Jun 2018

‘Visited Narayana School run by M/s Tallur Trust and observed various activities taken up here. Today we have handed over DD for Rs. 180000/- being 50% cost of installation of solar system under Syndicate Bank’s CSR Scheme. Tallur Trust is doing great work and helping especially abled children. I wish all the very best and appreciate the work done.’

S.S. Hegde, DGM, Syndicate Bank, Udupi. | 10 April 2018

‘Thank you so much for welcoming us with so much warmness. I really enjoyed the little time we spent here; the children are very smiling, they made us feel like in our family and all the teachers very nice also. Good luck with your work, i hope everything will be fine, still being courageous and human like you are.’

Lola (French girl with the guitar) | 09 April 2018

‘Even if it was a short mission, Lola and I really appreciated being part of your very warm and welcoming school team. I admire the work you have done and keep on doing and hope I can be as patient as you are with the lovely children you take care of See you again in Tallur (or in France! you are welcome).’

Lola (French girl with the guitar) | 09 April 2018

‘Dear Tallur Family Trust member/ all excellent platform to integrator there disable/retard children great job from you all. Keep going and will associate if needed for any assistance.’

MANJUNATHA H.T., SELCO FOUNDATION, BANGALURU

‘ತಲ್ಲೂರಿನಲ್ಲಿ ನಡೆಯುತ್ತಿರುವ ಶ್ರೀ ನಾರಾಯಣ ವಿಶೇಷ ಮಕ್ಕಳ ಶಾಲೆಯನ್ನು ಭೇಟಿ ಮಾಡಿ ಬಹಳ ಸಂತೋಷವಾಯಿತು. ಇಲ್ಲಿ ಇನ್ನೂ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುವಂತಾಗಲಿ, ನಮ್ಮ “World Kundapurian” Facebook page ಕಡೆಯಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡುವ ಭರವಸೆಯನ್ನು ನೀಡುತ್ತೇವೆ. ಈ ವಿಶೇಷ ಮಕ್ಕಳ ಜೊತೆ ಸಮಯ ಕಳೆಯಲು ಹಾಗೆ ನಮ್ಮ “ಆಸರೆ” ಕಾರ್ಯಕ್ರಮವನ್ನು ನಡೆಸಲು ಅವಕಾಶವನ್ನು ನೀಡಿದ ಶಾಲೆಯ ಆಡಳಿತ ಮಂಡಳಿಗೂ ಹಾಗೂ ಅಧ್ಯಾಪಕ ವೃಂದದವರಿಗೆ ಧನ್ಯವಾದಗಳು.’

World Kundapurian, GN Tyradi.

‘Excellent Noble Effort and Project.’

Dilip Ranade & Smitha Ranade, Prince of Wales Museum, Mumbai | 22 Jan 2008

‘ತುಂಬಾ ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ನಿಜವಾಗಿಯೂ ಶ್ಲಾಘನೀಯ.’

Vasanthi Das, CRP, Hemmadi | 01 Mar 2008

‘ಸ್ವಲ್ಪ ಕಾಲಾವಕಾಶದಲ್ಲಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಶಾಲೆಯಾಗಿದೆ. ಇದು ವ್ಯವಸ್ಥಾಪಕರಿಗೂ ಶಿಕ್ಷಕರಿಗೂ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸಂತೋಷ.’

T.Subraya Prabhu, Tallur | 26 Mar 2008

‘Step towrds prosperity.’

Angod Rathnakar Shetty, Retd Teacher, Kudlu-Kanyana

‘ಬುದ್ಧಿಮಾಂದ್ಯ ಮಕ್ಕಳ ಬಾಳಿನಲ್ಲಿ ಹೊಸಬೆಳಕನ್ನು, ಆತ್ಮಸ್ಥೆರ್ಯ ಮೂಡಿಸುವಲ್ಲಿ ಈ ಶಾಲೆಯ ಶಿಕ್ಷಕಿಯರು ಹಾಗೂ ಟ್ರಸ್ಟಿಗಳು ಸಫಲರಾಗಿದ್ದಾರೆ. ಅವರಿಂದ ಇನ್ನು ಮುಂದೆ ಇದಕ್ಕಿಂತ ಹೆಚ್ಚಿನ ಕೆಲಸ ಆಗಲಿ ಎಂದು ಹಾರೈಸುತ್ತೇವೆ.’

K. Shridhar Shetty, Rtd teacher, Tallur-Nattibail

‘ನಾರಾಯಣ ವಿಶೇಷ ಮಕ್ಕಳ ಶಾಲೆಯ ಎಲ್ಲಾ ಟ್ರಸ್ಟಿಗಳನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ನಿಮ್ಮ ಪ್ರಯತ್ನ ಶ್ಲಾಘನೀಯ. ನನಗೆ ತುಂಬಾ ಸಂತೋಷವಾಗಿದೆ. ದೇವರು ನಿಮಗೆಲ್ಲರಿಗೂ ಆರೋಗ್ಯ ದಯಪಾಲಿಸಲಿ.’

T.Narayana Shetty,Tallur | 10 Apr 2008

‘ನಾರಾಯಣ ವಿಶೇಷ ಮಕ್ಕಳ ಶಾಲೆಯನ್ನು ತೆರೆದು ಕತ್ತಲೆ ತುಂಬಿದ ಮಕ್ಕಳ ಬಾಳಿಗೆ ಬೆಳಕನ್ನು ನೀಡುವಂತ ಕೆಲಸವನ್ನು ಆರಂಭಿಸಿದ ಶಾಲೆಯ ಎಲ್ಲಾ ಟ್ರಸ್ಟಿಗಳು ಅಭಿನಂದನಾರ್ಹರು. ಈ ಮಕ್ಕಳನ್ನು ತರಬೇತಿಗೊಳಿಸುವ ಶಿಕ್ಷಕಿಯ ತಾಳ್ಮೆ ನಿಜಕ್ಕೂ ಶ್ಲಾಘನೀಯ. ಸಂಸ್ಥೆಯು ಭವಿಷ್ಯದಲ್ಲಿ ಉತ್ತಮ ಹೆಸರನ್ನು ಪಡೆದು ಮಾದರಿ ಸಂಸ್ಥೆ ಎನಿಸಲೆಂದು ಹಾರೈಸುತ್ತೇನೆ.’

ಪ್ರೇಮಾನಂದ ಕೆ, ಶಿಕ್ಷಕರು, ತಲ್ಲೂರು

‘ದಿನಾಂಕ ೧೧/೧೦/೨೦೦೮ ರಂದು ಈ ಶಾಲೆಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ದಾಖಲೆಗಳನ್ನು ಪರಿಶೀಲಿಸಿದೆ. ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡು ಮಕ್ಕಳ ಅಭಿವೃದ್ಧಿಯಲ್ಲಿ ಶ್ರಮ ವಹಿಸುತ್ತಿದ್ದಾರೆ. ಕೆಲವು ಮಕ್ಕಳ ಮಗ್ಗಿ, ವಿಳಾಸ ಬರೆದಿರುವುದನ್ನು ಗಮನಿಸಿದೆ. ಈ ಶಾಲೆಯಲ್ಲಿರುವ ಮಕ್ಕಳಿಗೆ ಇನ್ನು ಹೆಚ್ಚಿನ ಸಾಮರ್ಥ್ಯಗಳನ್ನು ದೇವರು ನೀಡಲಿ ಎಂದು ಹಾರೈಸುತ್ತೇನೆ.’

ನಾಗೇಶ ಕೆ. ನಾಯ್ಕ, ಸಿ.ಎ.ಇ.ಒ.,ಹೆಮ್ಮಾಡಿ

‘Serving the Mentally ill/Retarded persons is like serving the God itself. Wishing all the best to this institution, let the society take special interest & Care of the God’s own Children.’

Mohamed Ashraf A, Principal Civil Judge (Jr.Div) | 17 Oct 2008

‘I appreciate the service mind of the organizers of this institution and I wish all the success in their endeavor in bringing up the children.’

K.G. Chitra, Additional Civil Judge (JD), Kundapur | 17 Oct 2008

‘This institution is rendering commendable service. It is a need of the mentally retarded children of this society and it should be the concern of each and every person in the society.’

T.B.Shetty, Advocate, Kundapur | 14 Nov 2008

‘Today I have attended program on the occasion of birthday of late Pandit Jawhar Lal Neharu. It is joint function held with R.C.C. Tallur & Narayana Special School, Tallur. I am very much impressed with the performance of disabled school children I wish every success to them in their future.’ 

K.Shankar, Rotary President, Kundapur South | 14 Nov 2008

‘ಸ್ವಯಂಸೇವಕರ ತರಬೇತಿಯ ಅಂಗವಾಗಿ ನಾರಾಯಣ ವಿಶೇಷ ಶಾಲೆಯನ್ನು ಭೇಟಿ ನೀಡಿ ಶಿಕ್ಷಕರು, ಸಂಸ್ಥೆಯವರಿಂದ ಸ್ವಯಂಸೇವಕರಿಗೆ ಅಗತ್ಯ ಮಾಹಿತಿಗಳನ್ನು ಪ್ರಾತ್ಯಕ್ಷಿಕವಾಗಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸುತ್ತಮುತ್ತ ವಾತಾವರಣ ಮತ್ತು ಒಳಾಂಗಣವನ್ನು ಗಮನಿಸಿದಾಗ ತುಂಬಾ ಅಚ್ಚುಕಟ್ಟಾಗಿ ತಮ್ಮದೇ ಆದ ವ್ಯವಸ್ಥೆಯಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಫ್ಯಾಮಿಲಿ ಟ್ರಸ್ಟ್ ಇವರಿಗೆ ಇಲಾಖೆಯವರು ಕೃತಜ್ಞತೆ ಸಲ್ಲಿಸುತ್ತೇವೆ.’

ಶಿವಾಜಿ, ಜಿಲ್ಲಾ ಸಮನ್ವಯ ಶಿಕ್ಷಣಾ ಸಮನ್ವಯಾಧಿಕಾರಿಗಳು

‘ದಿನಾಂಕ ೨೧/೦೧/೨೦೧೦ರಂದು ಅಪರಾಹ್ನ ಈ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಮ್ಮ ಸಂಸ್ಥೆಯು ಗೈಯುವ ಕಾರ್ಯಚಟುವಟಿಕೆಗಳನ್ನು ಗಮನಿಸಲಾಗಿದೆ. ಸಮರ್ಪಕವಾಗಿ ಪ್ರಾಮಾಣಿಕ ಕಳಕಳಿಯಿಂದ ತಮ್ಮನ್ನು ತೊಡಗಿಸಿಕೊಂಡು ವಿಶೇಷ ಮಕ್ಕಳನ್ನು ತರಬೇತುಗೊಳಿಸುತ್ತಿರುವ ಸಂಸ್ಥೆಯ ಸರ್ವರಿಗೂ ಅಭಿನಂದನೆಗಳು. ನಿಮ್ಮ ಸಂಸ್ಥೆ ಇನ್ನು ಹೆಚ್ಚು ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ.’

ಶ್ರೀನಿರಂಜನ. ಭಟ್. ಎಂ

ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಅಂಗವಿಕಲರ ಕಲ್ಯಾಣ ಇಲಾಖೆ, ಉಡುಪಿ.

‘Today attended the function of the school, students performed well. The Tallur Family trust is doing service for mentally challenged in a rural place like Tallur with sincere effort. Wishing them success in their endeavour.’

Dr. H. Ramamohan, Kundapur | 24 Jan 2010

‘ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ನೋಡಿ ಸಂತೋಷವಾಯಿತು. ತರಬೇತುದಾರರ ಶ್ರಮ ಸಾರ್ಥಕವೆನಿಸಿತು ಹಾಗೂ ಈ ಸಂಸ್ಥೆಯ ಸ್ಥಾಪಕರಾದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸರ್ವಸದಸ್ಯರಿಗೆ ದೇವರು ಶಕ್ತಿಯನ್ನು ಕೊಟ್ಟು ಹೆಚ್ಚಿನ ಸಹಕಾರ ಸಮಾಜಕ್ಕೆ ಕೊಡುವಂತಾಗಲಿ ಎಂದು ಹಾರೈಸುತ್ತೇನೆ.’

ಟಿ. ಮಹಾಲಿಂಗ ಕೊಟ್ಟಾರಿ, ನಿವೃತ್ತ ಶಿಕ್ಷಕರು, ತಲ್ಲೂರು

‘ದಿನಾಂಕ ೧೦/೦೨/೨೦೧೦ರಂದು ಬೆಳಿಗ್ಗೆ ೯ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ೨೦೦೮-೦೯ನೇ ಸಾಲಿನ ವಿಶೇಷ ಬಿ.ಎಡ್ ತರಬೇತಿ ಯೋಜನೆಯ ಅಂಗವಾಗಿ ಶಾಲೆಗೆ ಭೇಟಿ ನೀಡಲಾಯಿತು. ಈ ಶಾಲೆಯಲ್ಲಿ ಒಟ್ಟು 11 ಮಕ್ಕಳು ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ೩ ಜನ ಶಿಕ್ಷಕಿಯರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಸಂಸ್ಥೆಯು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅತ್ಯುತ್ತಮವಾಗಿ ನಡೆಯುತ್ತಿದ್ದು, ಹೊಸ ಕಟ್ಟಡದ ರಚನೆ ಕೂಡಾ ನಡೆಯುತ್ತಿದುದು ಕಂಡು ಬಂದಿದೆ. ಈ ಫ್ಯಾಮಿಲಿಟ್ರಸ್ಟ್ನ ಸರ್ವಸದಸ್ಯರಿಗೂ ಉತ್ತಮವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಕ್ಷಕಿಯರಿಗೆ ದೇವರ ಮಕ್ಕಳಾದ ವಿಶೇಷಮಕ್ಕಳಿಗೂ ಒಳ್ಳೆಯ ಉತ್ತೇಜನ ಸಿಗಲಿ ಎಂದು ಹಾರೈಸುತ್ತೇವೆ.’

ರಾಘವೇಂದ್ರದೇವಾಡಿಗ, ಸಿ.ಆರ್.ಪಿ., ಪಡುಕೋಣೆ, ಉಡುಪಿ

‘ದಿ. ೨೦.೦೩.೨೦೧೦ರಂದು ಅಪರಾಹ್ನ ಕೆ.ಎಸ್.ಒ.ಯುನಲ್ಲಿ ಬಿ.ಇಡಿ ಮಾಡುತ್ತಿರುವ ನಾವು ಈ ಶಾಲೆಗೆ ಭೇಟಿ ನೀಡಿ ಶಾಲೆಯ ಕುರಿತು ಸಮಗ್ರ ಮಾಹಿತಿಯನ್ನು ಪಡೆದೆವು. ಸರಕಾರದ ನೆರವಿಗೆ ಕಾಯದೆ ಸ್ವಂತ ಖರ್ಚಿನಿಂದ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟಿಗೂ, ತಾಳ್ಮೆ-ಶಿಸ್ತಿನಿಂದ ಕಲಿಸುತ್ತಿರುವ ಶಿಕ್ಷಕವೃಂದದವರಿಗೂ ತುಂಬು ಹೃದಯದ ಕೃತಜ್ಞತೆಗಳು.’

ಭಾಸ್ಕರ ಆಚಾರಿ, ಸ.ಹಿ.ಉ.ಜಿ.ಪಂ.ಹಿ.ಪ್ರಾಶಾಲೆ, ಕಜ್ಕೆ, ಬ್ರಹ್ಮಾವರ

‘ದಿನಾಂಕ ೦೭/೦೭/೨೦೧೦ರಂದು ನಾವು ಇಲ್ಲಿನ ಮಕ್ಕಳಿಗೆ ತರಬೇತಿಗೋಸ್ಕರ ಹೊಲಿಗೆಯಂತ್ರವನ್ನು ಹಸ್ತಾಂತರಿಸಿದೆವು ಹಾಗೂ ಇಲ್ಲಿನ ಮಕ್ಕಳ ಚಟುವಟಿಕೆಗಳನ್ನು ಗಮನಿಸಿ ನಮಗೆ ತುಂಬಾ ಸಂತೋಷವಾಯಿತು. ಹಾಗೆಯೇ ಹೆಮ್ಮೆಯೂ ಆಯಿತು. ನಮ್ಮ ಆನ್ಸ್ ಕ್ಲಬ್ ಸದಸ್ಯೆಯರ ನೇತೃತ್ವದಲ್ಲಿ ಈ ಶಾಲೆ ನಡೆಯುತ್ತಿರುವುದು ಸಂತೋಷದ ವಿಚಾರ. ದೇವರು ನಿಮಗೆ ಹೆಚ್ಚಿನ ಸೇವೆ ಸಲ್ಲಿಸಲು ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ.’

Ann’s club Koteshwara, President& Members, Koteshwara

‘ದಿನಾಂಕ ೧೫/೦೮/೨೦೧೦ರಂದು ಶ್ರೀ ನಾರಾಯಣ ವಿಕಲಚೇತನ ಸಂಸ್ಥೆಗೆ ಭೇಟಿ ಕೊಟ್ಟಿರುತ್ತೇವೆ. ಇಲ್ಲಿನ ಉತ್ತಮ ಗುಣಮಟ್ಟದ ತರಬೇತಿ ಪ್ರಶಂಶಿಸಲರ್ಹವಾದುದು.’

ಲಕ್ಷ್ಮಿ, ಮುದ್ದುಗುಡ್ಡೆರಸ್ತೆ, ಕುಂದಾಪುರ

‘ತಾ ೧೫/೦೮/೨೦೧೦ರಂದು ಶಾಲೆಗೆ ಭೇಟಿ ಕೊಟ್ಟಾಗ ವಿದ್ಯಾರ್ಥಿಗಳ ಚಟುವಟಿಕೆಗಳು ಚೇತೋಹಾರಿ ಆಗಿರುತ್ತದೆ. ಶ್ರೇಯಸ್ಸನ್ನುಹಾರೈಸುತ್ತೇನೆ.’ 

ಎ. ರತ್ನಾಕರಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ, ಕೋಡ್ಲು-ಕನ್ಯಾನ

‘It was very interesting visit to the school. I like this atmosphere’

Barbara Hossli, Switzerland.

‘Wish to thank this great kind teachers of this school at this small place like Tallur. I congratulate all the trustees, staff and children.’

SURESH KUMAR.G, ಕುವೆಂಪು ನಗರ ಮೈಸೂರು

‘ದಿನಾಂಕ ೨೪/೦೨/೨೦೧೧ರಂದು ನಾರಾಯಣ ವಿಕಲಚೇತನರ ವಿಶೇಷ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಬುದ್ದಿಮಾಂದ್ಯ ಮಕ್ಕಳು ಅಳುಕಿಲ್ಲದೆ ಕಲಿಕೆಯಲ್ಲಿ ತಮ್ಮನ್ನು ಈ ಪ್ರಶಾಂತ ವಾತಾವರಣದಲ್ಲಿ ತೊಡಗಿಸಿಕೊಂಡಿರುವುದನ್ನು ಕಂಡಿದ್ದೇನೆ. ಶಿಕ್ಷಕರು ಮತ್ತು ವ್ಯವಸ್ಥಾಪಕರು ಕೂಡಾ ಬುದ್ದಿಮಾಂದ್ಯ ಮಕ್ಕಳೊಂದಿಗೆ ಬೆರೆಯುವುದು ಸಂತೋಷ ಮತ್ತು ಹೆಮ್ಮೆಆಯಿತು. ಖಂಡಿತವಾಗಿಯೂ ಸರ್ಕಾರ ಇವರೊಂದಿಗೆ ಸೇರುವುದು ಅತೀ ಅಗತ್ಯ.’

ಅನಂತ ಮೋವಾಡಿ

ಉಡುಪಿ ಜಿಲ್ಲಾಪಂಚಾಯತ್ ಸದಸ್ಯರು,ತ್ರಾಸಿ-ಕ್ಷೇತ್ರ, ತಲ್ಲೂರು೨೪/೦೭೧೧

‘ದಿನಾಂಕ ೨೪/೦೭/೨೦೧೧ರಂದು ಈ ಶಾಲೆಗೆ ಭೇಟಿ ನೀಡಲಾಯಿತು. ಶಾಲೆಯಲ್ಲಿ ಒಳ್ಳೆಯ ಕಲಿಕೆ ವಾತಾವರಣವಿದ್ದು, ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಸತಿಯುತ ಶಾಲೆಯನ್ನು ಮಾಡಿದಲ್ಲಿ ಮಕ್ಕಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇರಬಹುದು. ಶಾಲೆಯ ವಾತಾವರಣ ಉತ್ತಮವಾಗಿದೆ.’

ಸತ್ಯಪ್ರಸನ್ನ,ಇಎಆರ್ಟಿಬಿ ಇಡೂರು

‘ತಾ.೩೦/೦೩/೨೦೧೧ರಂದು ತಲ್ಲೂರು ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿರುತ್ತೇವೆ. ಇಲ್ಲಿ ಮಕ್ಕಳ ಬಗ್ಗೆ ಕಾಳಜಿ ಇಲ್ಲಿಯ ಅಧ್ಯಾಪಕರಿಗಿದ್ದು ಮತ್ತು ಕಾರ್ಯಕ್ರಮಗಳು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಹೊಂದಿ ಬುದ್ದಿಮಾಂದ್ಯ ಮಕ್ಕಳಿಗೆ ಆಶ್ರಯಧಾಮ ಆಗಲಿ ಎಂದು ಹಾರೈಸುತ್ತೇನೆ.’

ಕೆ. ಬಾಬುಶೆಟ್ಟಿ

ಅಧ್ಯಕ್ಷರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಉಡುಪಿ ಜಿಲ್ಲಾಪಂಚಾಯತ್

’ದಿನಾಂಕ ೩೦/೦೩/೨೦೧೧ರಂದು ಭೇಟಿ ನೀಡಿದಾಗ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಮಕ್ಕಳನ್ನು ಗಮನಿಸಿದಾಗ ಉತ್ತಮ ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ. ಇದರಿಂದ ಪೋಷಕರನ್ನು ನಮ್ಮ ಮಕ್ಕಳ ಬಗ್ಗೆ ಇನ್ನಷ್ಟು ಜಾಗ್ರತಗೊಳಿಸಲು ಸಾಧ್ಯ.’

ಚಂದ್ರಶೇಖರ ಹೆಚ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೈಂದೂರು

‘ಟಿ.ಸಂಜೀವ ಗಾಣೀಗರು ಹಾಗು ಶ್ರೀನಿವಾಸ ಗಾಣೀಗರು ಇವರ ಒಂದು ಶ್ರಮ ಹಾಗು ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ’

RTA V. G. Shetty, Koteshwara, Rotary club Koteshwara, Aans club Koteshwara

‘A great & dedicated job. Words are not sufficient to explain the amount of dedication. Let the grace of the God be with all the staff and children.’

Y.N.Hegde, Tallur

‘Very good work done by Shri. Suresh. All the best God bless you all.’

Mr.Shivanath Shetty,Tallur | 5 Jul 2011


Supported us in One and Another Way